ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಇವರಿಬ್ಬರದ್ದೇ ಕಾದಾಟ. ರಮ್ಯಾ ಅಭಿಮಾನಿಗಳು 'ಐ ಸ್ಟಾಂಡ್ ವಿತ್ ರಮ್ಯಾ' ಎಂದು ಅಭಿಯಾನ ಪ್ರಾರಂಭ ಮಾಡಿದರೆ ಈ ಕಡೆ ಜಗ್ಗೇಶ್ ಅಭಿಮಾನಿಗಳು ಸರಿಯಾಗಿ ಹೇಳಿದ್ದೀರಾ ಅಣ್ಣ ಅಂತ ನವರಸ ನಾಯಕನಿಗೆ ಜೈಕಾರ ಹಾಕಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಟೀಕಿಸಿ ಬಿಜೆಪಿ ಪಕ್ಷದವರ ಕಂಗೆಣ್ಣಿಗೆ ಬಲಿಯಾಗಿರುವ ರಮ್ಯಾ ಅವರ ಇಂಚಿಂಚು ಚಲನವಲನವನ್ನ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ರಮ್ಯಾ ಫೇಕ್ ಅಕೌಂಟ್ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ರಮ್ಯಾ ಹಾಗೂ ಜಗ್ಗೇಶ್ ವಿಚಾರದಲ್ಲಿ ಪರ ವಿರೋಧ ಚರ್ಚೆಗಳ ಮಧ್ಯೆ ಹೊಸ ವಿಚಾರ ಬಯಲಿಗೆ ಬಂದಿದೆ. ಏನಿದು ಫೇಕ್ ಅಕೌಂಟ್ ಬಂಡವಾಳ? ಯಾರದ್ದು ಫೇಕ್ ಅಕೌಂಟ್ ? ಸಂಪೂರ್ಣ ಮಾಹಿತಿ ಇಲ್ಲಿದೆ.